ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಸಂಕೇತ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕಿವುಡರು ಮತ್ತು ಸಂಕೇತ ಭಾಷೆಯನ್ನು ಬಳಸುವ ಇತರ ಜನರ ಭಾಷಾ ಗುರುತನ್ನು ರಕ್ಷಿಸಲು ಅಂತರರಾಷ್ಟ್ರೀಯ ಸಂಜ್ಞಾ ಭಾಷೆಗಳ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷದ ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನದ 2024 ರ ಥೀಮ್ “ಸೈನ್ ಲ್ಯಾಂಗ್ವೇಜ್ ರೈಟ್ಸ್ ಗಾಗಿ ಸೈನ್ ಆಫ್ ಮಾಡಿ” ಎಂಬುದು ಥೀಮ್ ಆಗಿದೆ.
ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಈ ನಿರ್ದಿಷ್ಟ ದಿನವನ್ನು ಅಂತರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಸ್ಮರಿಸಲು ನಿರ್ಧರಿಸಿತು.
‘ವರ್ಲ್ಡ್ ಫೆಡರೇಷನ್ ಆಫ್ ದಿ ಡೆಫ್’ (WFD) ಕಿವುಡ ಜನರ 135 ರಾಷ್ಟ್ರೀಯ ಸಂಘಗಳ ಒಕ್ಕೂಟವಾಗಿದ್ದು, ಫೆಡರೇಶನ್ ಪ್ರಪಂಚದಾದ್ಯಂತ ಸುಮಾರು 70 ಮಿಲಿಯನ್ ಕಿವುಡ ಜನರನ್ನು ಪ್ರತಿನಿಧಿಸುತ್ತದೆ.
ಕಿವಿ ಕೇಳದಿರುವವರ ಅಂತರರಾಷ್ಟ್ರೀಯ ವಾರದ ಭಾಗವಾಗಿ 2018 ರಲ್ಲಿ ಮೊದಲ ಅಂತರರಾಷ್ಟ್ರೀಯ ಸಂಕೇತ ಭಾಷೆಯ ದಿನವನ್ನು ಆಚರಿಸಲಾಗಿದ್ದು, ಇದು ಸೆಪ್ಟೆಂಬರ್ 1958 ರಲ್ಲಿ ಮೊದಲು ಆಚರಿಸಲಾಯಿತ್ತು.
ಕಿವಿ ಕೇಳದವರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳ “ಕುರಿತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸಂಘಟನೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ನೀಲಿ ದೀಪ ಬೆಳಗಿಸಿ ಸಂಜ್ಞಾ ಭಾಷಾ ದಿನವನ್ನು ಆಚರಿಸುತ್ತವೆ.
Subscribe to Updates
Get the latest creative news from FooBar about art, design and business.


1 Comment
Hey folks! Just tried out 321gobetlogin, easy peasy login process, just like I like it! Quick and painless. Makes getting into the games a breeze. Check it out for yourself! 321gobetlogin