* ದೇಶದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯನ್ನು ಹುರೂನ್ ಇಂಡಿಯಾ ಸಂಸ್ಥೆಯು ಬಿಡುಗಡೆ ಮಾಡಿದೆ.
* HCL ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರ(ಮೌಲ್ಯ Rs. 84,330) ಅವರು ಮೊದಲ ಸ್ಥಾನದಲ್ಲಿದ್ದಾರೆ.
* ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಕ್ರಮವಾಗಿ ನೈಕಾ ಕಂಪನಿಯ ಸಿಇಒ ಫಲ್ಗುಣಿ ನಾಯರ್ ಮತ್ತು ಕುಟುಂಬ(ಮೌಲ್ಯ Rs. 57,520) ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಂಜುದಾರ್ ಶಾ(ಮೌಲ್ಯ Rs. 29,030) ಇದ್ದಾರೆ.
* ಕೋಟಕ್ ಪ್ರೈವೇಟ್ ಬ್ಯಾಂಕಿಂಗ್ ಹುರೂನ್ ಲೀಡಿಂಗ್ ವೆಲ್ತಿ ವಿಮೆನ್ 2021 ‘ ಹೆಸರಿನ ವರದಿಯನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದೆ.
* 2021 ರ ಡಿಸೆಂಬರ್ 31 ರವರೆಗಿನ ಮಾಹಿತಿ ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
* ಔಷಧ ಉದ್ಯಮ, ಆರೋಗ್ಯಸೇವೆ, ಗ್ರಾಹಕ ಬಳಕೆ ಸರಕುಗಳ ಉದ್ಯಮ ವಲಯದ ಮಹಿಳೆಯರು ಶ್ರೀಮಂತರ ಪಟ್ಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಥಾನ ಪಡೆದಿದ್ದಾರೆ.

