ಲಾಪತಾ ಲೇಡೀಸ್’ ಚಿತ್ರದ ನಂತರ ಇದೀಗ ಬಾಲಿವುಡ್ ನಟ ರಣದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸಾವರ್ಕರ್’ ಚಿತ್ರ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ.
ಹಿಂದುತ್ತವಾದಿ ಸಾವರ್ಕರ್ ಜೀವನಗಾಥೆಯನ್ನು ಹೊಂದಿದ ಈ ಸಿನಿಮಾದಲ್ಲಿ ರಣ್ ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದರು.
ಮಾರ್ಚ 2024ರಲ್ಲಿ ಹಿಂದಿ ಹಾಗೂ ಮಾರಾಠಿಯಲ್ಲಿ ತೆರೆಕಂಡಿತ್ತು. ನಟ ರಣ್ ದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಚಿತ್ರತಂಡ ಪೋಸ್ಟರ್ ವೊಂದನ್ನು ಹಂಚಿಕೊಂಡಿದೆ.
‘ನಮ್ಮ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಚಲನಚಿತ್ರ ಫೆಡರೇಷನ್ ಗೆ ಧನ್ಯವಾದಗಳು. ಇದೊಂದು ಅಧ್ಬುತ ಪ್ರಯಾಣವಾಗಿದ್ದು, ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ತಿಳಿಸಿದೆ.
Subscribe to Updates
Get the latest creative news from FooBar about art, design and business.
Next Article ಸೆಪ್ಟೆಂಬರ್ 25 ವಿಶ್ವ ಔಷಧಿಕಾರರ ದಿನ

1 Comment
Is 365jllegit legit? From my experience, yeah it looks right so far. Had a smooth experience with deposits and withdrawals. Check it out here: 365jllegit